Saturday, 11 March 2017

ತಿರುಪತಿಯಿಂದ ಕನ್ಯಾಕುಮಾರಿಯವರೆಗೆ - ಬ ನ್ ಸುಂದರರಾವ್ ಮತ್ತು ರತ್ನಮ್ಮ ಸುಂದರರಾವ್

ತಿರುಪತಿಯಿಂದ ಕನ್ಯಾಕುಮಾರಿಯವರೆಗೆ ಎಂಬ ಈ ಪುಸ್ತಕದಲ್ಲಿ ಬ ನ್ ಸುಂದರರಾವ್ ಮತ್ತು ರತ್ನಮ್ಮ ಅವರು ತಮ್ಮ ದಕ್ಷಿಣ ಭಾರತದ ಪ್ರವಾಸದ ಅನುಭವಗಳನ್ನು ದಾಖಲಿಸಿದ್ದಾರೆ. ಅದಕ್ಕೆ ಪೂರಕವಾಗಿ ಒಂದನೇ ಭಾಗದಲ್ಲಿ ತೀರ್ಥಯಾತ್ರೆ, ಪೂಜಾವಿಧಾನ, ದೇವಾಲಯದ ರಚನೆ ಹಾಗೂ ಪ್ರವಾಸದ ಮಹತ್ವವನ್ನು, ನಂತರ ಎರಡನೇ ಭಾಗದಲ್ಲಿ ದಕ್ಷಿಣ ಭಾರತದ ಎಲ್ಲಾ ತೀರ್ಥಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಕಡೆಯಲ್ಲಿ ತಾವು ಮಡಿದ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಶ್ರೀ ಎಸ್ ಕೆ ರಾಮಚಂದ್ರ ರಾವ್ ಅವರು ಮುನ್ನುಡಿಯನ್ನು ಬರೆದ್ದಿದ್ದಾರೆ. ಅವನಿ ಸಂಸ್ಥಾನದ ಜಗದ್ಗುರುಗಳಾದ ಶ್ರೀಮದಭಿನವೋದ್ದಂಡ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಅವರು ಸಂದೇಶವನ್ನು ನೀಡಿದ್ದಾರೆ. ಶ್ರೀಯುತರಾದ ಎಂ ಲಕ್ಷ್ಮೀನರಸಿಂಹ ಶಾಸ್ತ್ರೀ , ಎ ಎಂ ಅಣ್ಣಿಗೇರಿ, ಶ್ರೀ ಕೆ ಕೃಷ್ಣಜೋಯಿಸ್, ಶ್ರೀ ಕೆ ಎಸ್ ನಾಗರಾಜನ್ ಹಾಗು ಶ್ರೀ ಕೆ ಪಿ ಶಿವಲಿಂಗಯ್ಯ ಅವರು ಅಭಿನಂದನೆ, ಅಭಿಪ್ರಾಯ ಹಾಗು ಹಾರೈಕೆಗಳನ್ನು ನೀಡಿದ್ದಾರೆ.
















Friday, 10 March 2017

ಯುದ್ಧದ ಹಡಗು ಹಾಗೂ ಶಿಸ್ತಿನ ಸೈನಿಕ

ಕನ್ನಡನಾಡಿನ ಸಾಮಾನ್ಯ ಬಡಕುಟುಂಬದಲ್ಲಿ ಹುಟ್ಟಿದ ಯೋಧನೊಬ್ಬನ ಬಲಿದಾನದ ಕತೆ. ದೇಶಸೇವೆಯನ್ನು ಉತ್ತೇಜಿಸುವ ಒಂದು ಉತ್ತಮ ಮಕ್ಕಳ ಪುಸ್ತಕ. ಇದಕ್ಕೆ ಅಂದಿನ ಮಂತ್ರಿಗಳಾಗಿದ್ದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರು ಮುನ್ನುಡಿ ಬರೆದಿದ್ದಾರೆ.






ಮಾನೀಟರ್ ಮಾಧು

ಮಕ್ಕಳ ನಾಟಕ, ರಂಗಸ್ಥಳದ ಮೇಲೆ ಅಭಿನಯಿಸಬಹುದು. ವಿದ್ಯಾರ್ಥಿಗಳಿಗೆ ಒಂದು ಉತ್ತಮ ಸಂದೇಶ ನೀಡುತ್ತದೆ. ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶೀ ಜಿ. ನಾರಾಯಣ ಅವರು ಮುನ್ನುಡಿ ಬರೆದಿದ್ದಾರೆ. ಡಾ. ಏನ್ ಎಸ್ ಅನಂತರಂಗಾಚಾರ್, ಡಾ. ಕೆ ಎಸ್ ನಾಗರಾಜನ್ ಹಾಗು ಡಾ. ವಸಂತ ದೇಸಾಯಿ ಅವರು ನಾಟಕದ ಬಗ್ಗೆ ಬರೆದು ತಮ್ಮ ಹಾರೈಕೆ ಗಳನ್ನು ನೀಡಿದ್ದಾರೆ.













ಸಂಧ್ಯಾವಿಹಾರ








ಕವನ ಸಂಕಲನ - 32 ಕವನಗಳಿವೆ. ತಾಳಬದ್ಧವಾಗಿದ್ದು ಭಾವಗೀತೆಯಂತೆ ಹಾಡಬಹುದು. ಇದಕ್ಕೆ ದಿ. ದೇವುಡು ಅವರ ಸಂದೇಶ ಹಾಗೂ ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶೀ ಶಿವಮೂರ್ತಿಶಾಸ್ತ್ರಿಗಳು ಮುನ್ನುಡಿ ಬರೆದಿದ್ದಾರೆ .





ಮನೋಹರ ಕತೆಗಳು


100 ಪುಟಗಳ ಪುಸ್ತಕ, ಸಾಮಾಜಿಕ, ಧಾರ್ಮಿಕ, ಐತಿಹಾಸಿಕ ಎಂದು ವಿಂಗಡಿಸಿದ್ದು ಸುಮಾರು 36 ಕತೆಗಳನ್ನೊಳಗೊಂಡಿದೆ. ಪು.ತಿ. ನರಸಿಂಹಾಚಾರ್ ಅವರು ಮುನ್ನುಡಿಬರೆದಿದ್ದಾರೆ.








ಆಯ್ದ ಐದು ಕತೆಗಳು






ಆಯ್ದ ಐದು ಕತೆಗಳು - 70 ಪುಟಗಳ ಪುಸ್ತಕ. ಒಟ್ಟು 5 ಕತೆಗಳಿವೆ. ಮೊದಲ ಮೂರನ್ನು ಬ.ನ.ಸುಂದರರಾವ್ ಅವರು ಬರೆದದ್ದು, ಇದು ಹೊಸದಾಗಿ ಓದು ಕಲಿತವರಿಗಾಗಿ, ಸಾಕ್ಷರತೆಗೆ ಸಂಬಂಧ ಪಟ್ಟಿದ್ದು. ಉಳಿದ ಎರಡನ್ನು ರತ್ನಮ್ಮ ಸುಂದರರಾವ್ ಬರೆದಿದ್ದಾರೆ. ಇದು ಕುಟುಂಬಯೋಜನೆಗೆ ಸಂಬಂಧ ಪಟ್ಟಿದ್ದು. ಇದಕ್ಕೆ ಅಂದಿನ ಮಂತ್ರಿಗಳಾಗಿದ್ದ ಶ್ರೀ ಕೆ. ಎಚ್, ಶ್ರೀನಿವಾಸ್ ಅವರು ಮುನ್ನುಡಿ ಬರೆದಿದ್ದಾರೆ.

ಅಂದಿನ ಮಂತ್ರಿಗಳಾಗಿದ್ದ ಶ್ರೀ ಕೆ. ಎಚ್, ಶ್ರೀನಿವಾಸ್ ಅವರು ಮುನ್ನುಡಿ :-
ಶ್ರೀಯುತ ಬ.ನ.ಸುಂದರರಾವ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ರತ್ನಮ್ಮ ಸುಂದರರಾವ್ ದಂಪತಿಗಳು"ಆಯ್ದ ಐದು ಕಥೆಗಳು" ಎಂಬ ಕಥಾಸಂಕಲನವನ್ನು ಹೊಸದಾಗಿ ಓದು ಕಲಿತವರ ಸಲುವಾಗಿ ರಚಿಸಿದ್ದಾರೆ. ಇವರೀರ್ವರೂ ಅನೇಕ ವರ್ಷಗಳಿಂದ ರಚಿಸಿರುವ ಸಾಹಿತ್ಯ ಕೃತಿಗಳಿಂದ ಪರಿಚಿತರಾಗಿದ್ದಾರೆ. ಕೇವಲ ಸಾಹಿತ್ಯಕ್ಕಿಂತ ಹೆಚ್ಚಾಗಿ ಸಮಾಜಸೇವೆ ಮತ್ತು ಜನಪರ ಕಾಳಜಿ ಇವರಲ್ಲಿ ಹೆಚ್ಚಾಗಿ ಎದ್ದು ಕಾಣುವ ಪ್ರವೃತ್ತಿ. ಅನಕ್ಸರತೆ ಮತ್ತು ತಪ್ಪು ತಿಳುವಳಿಕೆಯಿಂದ ಮಂಕು ಕವಿದಿರುವ ಸಮಾಜದ ಪಿಡುಗನ್ನು ನಿವಾರಿಸುವುದು ಕೇವಲ ಸರ್ಕಾರಿ ಕಾರ್ಯಕ್ರಮಗಳಿಂದ ಅಸಾಧ್ಯ. ಒಂದು ದೃಷ್ಟಿಯಿಂದ ಇದು ಕಷ್ಟದ ಕೆಲಸ. ಹಾಗೆಯೇ ಸಾಕ್ಷರಸ್ಥರು, ತಿಳಿದವರು ಮನಸ್ಸು ಮಾಡಿದರೆ ಇದು ಸುಲಭದ ಕೆಲಸವೂ ಹೌದು. ಅನಕ್ಷರತೆ ಹಾಗೂ ಅಜ್ಞಾನ ನಿವಾರಣಾ ಕಾರ್ಯ ಒಂದು ಮಹಾಯಜ್ಞದ ರೂಪದಲ್ಲಿ ಅವ್ಯಾಹತವಾಗಿ ನಡೆಯಬೇಕು. ಅಂಥ ಕೆಲಸಕ್ಕೆ ಈ ಕಥಾಸಂಕಲನವು ನೆರವಾಗುವುದರಲ್ಲಿ ಸಂದೇಹವಿಲ್ಲ.
ಶ್ರೀ ಕೆ.ಎಚ್. ಶ್ರೀನಿವಾಸ್