ಆಯ್ದ ಐದು ಕತೆಗಳು - 70 ಪುಟಗಳ ಪುಸ್ತಕ. ಒಟ್ಟು 5 ಕತೆಗಳಿವೆ. ಮೊದಲ ಮೂರನ್ನು ಬ.ನ.ಸುಂದರರಾವ್ ಅವರು ಬರೆದದ್ದು, ಇದು ಹೊಸದಾಗಿ ಓದು ಕಲಿತವರಿಗಾಗಿ, ಸಾಕ್ಷರತೆಗೆ ಸಂಬಂಧ ಪಟ್ಟಿದ್ದು. ಉಳಿದ ಎರಡನ್ನು ರತ್ನಮ್ಮ ಸುಂದರರಾವ್ ಬರೆದಿದ್ದಾರೆ. ಇದು ಕುಟುಂಬಯೋಜನೆಗೆ ಸಂಬಂಧ ಪಟ್ಟಿದ್ದು. ಇದಕ್ಕೆ ಅಂದಿನ ಮಂತ್ರಿಗಳಾಗಿದ್ದ ಶ್ರೀ ಕೆ. ಎಚ್, ಶ್ರೀನಿವಾಸ್ ಅವರು ಮುನ್ನುಡಿ ಬರೆದಿದ್ದಾರೆ.
ಅಂದಿನ ಮಂತ್ರಿಗಳಾಗಿದ್ದ ಶ್ರೀ ಕೆ. ಎಚ್, ಶ್ರೀನಿವಾಸ್ ಅವರು ಮುನ್ನುಡಿ :-
ಶ್ರೀಯುತ ಬ.ನ.ಸುಂದರರಾವ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ರತ್ನಮ್ಮ ಸುಂದರರಾವ್ ದಂಪತಿಗಳು"ಆಯ್ದ ಐದು ಕಥೆಗಳು" ಎಂಬ ಕಥಾಸಂಕಲನವನ್ನು ಹೊಸದಾಗಿ ಓದು ಕಲಿತವರ ಸಲುವಾಗಿ ರಚಿಸಿದ್ದಾರೆ. ಇವರೀರ್ವರೂ ಅನೇಕ ವರ್ಷಗಳಿಂದ ರಚಿಸಿರುವ ಸಾಹಿತ್ಯ ಕೃತಿಗಳಿಂದ ಪರಿಚಿತರಾಗಿದ್ದಾರೆ. ಕೇವಲ ಸಾಹಿತ್ಯಕ್ಕಿಂತ ಹೆಚ್ಚಾಗಿ ಸಮಾಜಸೇವೆ ಮತ್ತು ಜನಪರ ಕಾಳಜಿ ಇವರಲ್ಲಿ ಹೆಚ್ಚಾಗಿ ಎದ್ದು ಕಾಣುವ ಪ್ರವೃತ್ತಿ. ಅನಕ್ಸರತೆ ಮತ್ತು ತಪ್ಪು ತಿಳುವಳಿಕೆಯಿಂದ ಮಂಕು ಕವಿದಿರುವ ಸಮಾಜದ ಪಿಡುಗನ್ನು ನಿವಾರಿಸುವುದು ಕೇವಲ ಸರ್ಕಾರಿ ಕಾರ್ಯಕ್ರಮಗಳಿಂದ ಅಸಾಧ್ಯ. ಒಂದು ದೃಷ್ಟಿಯಿಂದ ಇದು ಕಷ್ಟದ ಕೆಲಸ. ಹಾಗೆಯೇ ಸಾಕ್ಷರಸ್ಥರು, ತಿಳಿದವರು ಮನಸ್ಸು ಮಾಡಿದರೆ ಇದು ಸುಲಭದ ಕೆಲಸವೂ ಹೌದು. ಅನಕ್ಷರತೆ ಹಾಗೂ ಅಜ್ಞಾನ ನಿವಾರಣಾ ಕಾರ್ಯ ಒಂದು ಮಹಾಯಜ್ಞದ ರೂಪದಲ್ಲಿ ಅವ್ಯಾಹತವಾಗಿ ನಡೆಯಬೇಕು. ಅಂಥ ಕೆಲಸಕ್ಕೆ ಈ ಕಥಾಸಂಕಲನವು ನೆರವಾಗುವುದರಲ್ಲಿ ಸಂದೇಹವಿಲ್ಲ.
ಶ್ರೀ ಕೆ.ಎಚ್. ಶ್ರೀನಿವಾಸ್
This comment has been removed by the author.
ReplyDelete