Saturday 11 March 2017

ತಿರುಪತಿಯಿಂದ ಕನ್ಯಾಕುಮಾರಿಯವರೆಗೆ - ಬ ನ್ ಸುಂದರರಾವ್ ಮತ್ತು ರತ್ನಮ್ಮ ಸುಂದರರಾವ್

ತಿರುಪತಿಯಿಂದ ಕನ್ಯಾಕುಮಾರಿಯವರೆಗೆ ಎಂಬ ಈ ಪುಸ್ತಕದಲ್ಲಿ ಬ ನ್ ಸುಂದರರಾವ್ ಮತ್ತು ರತ್ನಮ್ಮ ಅವರು ತಮ್ಮ ದಕ್ಷಿಣ ಭಾರತದ ಪ್ರವಾಸದ ಅನುಭವಗಳನ್ನು ದಾಖಲಿಸಿದ್ದಾರೆ. ಅದಕ್ಕೆ ಪೂರಕವಾಗಿ ಒಂದನೇ ಭಾಗದಲ್ಲಿ ತೀರ್ಥಯಾತ್ರೆ, ಪೂಜಾವಿಧಾನ, ದೇವಾಲಯದ ರಚನೆ ಹಾಗೂ ಪ್ರವಾಸದ ಮಹತ್ವವನ್ನು, ನಂತರ ಎರಡನೇ ಭಾಗದಲ್ಲಿ ದಕ್ಷಿಣ ಭಾರತದ ಎಲ್ಲಾ ತೀರ್ಥಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಕಡೆಯಲ್ಲಿ ತಾವು ಮಡಿದ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಶ್ರೀ ಎಸ್ ಕೆ ರಾಮಚಂದ್ರ ರಾವ್ ಅವರು ಮುನ್ನುಡಿಯನ್ನು ಬರೆದ್ದಿದ್ದಾರೆ. ಅವನಿ ಸಂಸ್ಥಾನದ ಜಗದ್ಗುರುಗಳಾದ ಶ್ರೀಮದಭಿನವೋದ್ದಂಡ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಅವರು ಸಂದೇಶವನ್ನು ನೀಡಿದ್ದಾರೆ. ಶ್ರೀಯುತರಾದ ಎಂ ಲಕ್ಷ್ಮೀನರಸಿಂಹ ಶಾಸ್ತ್ರೀ , ಎ ಎಂ ಅಣ್ಣಿಗೇರಿ, ಶ್ರೀ ಕೆ ಕೃಷ್ಣಜೋಯಿಸ್, ಶ್ರೀ ಕೆ ಎಸ್ ನಾಗರಾಜನ್ ಹಾಗು ಶ್ರೀ ಕೆ ಪಿ ಶಿವಲಿಂಗಯ್ಯ ಅವರು ಅಭಿನಂದನೆ, ಅಭಿಪ್ರಾಯ ಹಾಗು ಹಾರೈಕೆಗಳನ್ನು ನೀಡಿದ್ದಾರೆ.
















1 comment:

  1. ಶ್ರೀ ಎಸ್ ಕೆ ರಾಮಚಂದ್ರ ರಾವ್ ಅವರು ಜಯನಗರದ ಮಾಧವನ್ ಪಾರ್ಕ್ ಬಳಿ ವಾಸವಿದ್ದರು. ನಾವು ನಮ್ಮ ತಂದೆಯಿಂದ ಅವರಿಗೆ, ಅವರಿಂದ ನಮ್ಮ ತಂದೆಗೆ ಕಾಗದಗಳನ್ನು ರವಾನಿಸುತ್ತಾ ಅಂಚೆಯಣ್ಣನ ಕೆಲಸ ಮಾಡುತ್ತಿದ್ದೆವು. ಇದರ ಮುನ್ನುಡಿಯನ್ನು ನೋಡಿದಾಗ ಆ ಕಾಗದಗಲ್ಲಿ ಏನು ಇರುತ್ತಿತ್ತು ಎಂದು ಅರ್ಥವಾಗುತ್ತಿದೆ.

    ReplyDelete